ಆರು ವಾಹನಗಳಿಗೆ ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದ ನಕ್ಸಲರು: ಸ್ಥಳದಲ್ಲಿ ಬ್ಯಾನರ್ ಇಟ್ಟು ಪರಾರಿ - Maoists set fire on 6 vehicles
🎬 Watch Now: Feature Video
ಕಾಳಹಂಡಿ: ಒಡಿಶಾದ ಕಾಳಹಂಡಿ ಜಿಲ್ಲೆಯ ಸದರ್ ಪೊಲೀಸ್ ಠಾಣಾ ವ್ಯಾಪ್ತಿಯ ತಾಲಾ ಪಿಪಿಲಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ನಕ್ಸಲರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ 6 ವಾಹನಗಳಿಗೆ ಬೆಂಕಿ ಹಚ್ಚಿ, ಸ್ಥಳದಲ್ಲಿ ಬ್ಯಾನರ್ ಇಟ್ಟು ಪರಾರಿಯಾಗಿರುವ ಘಟನೆ ನಡೆದಿದೆ. ಮೂರು ಟ್ರ್ಯಾಕ್ಟರ್‌ಗಳು, ಎರಡು ಟಿಪ್ಪರ್‌ಗಳು ಮತ್ತು ಒಂದು ಅಗೆಯುವ ಯಂತ್ರವನ್ನು ಸುಟ್ಟು ಹಾಕಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ.