ಅಂಗಡಿ ಮಾಲೀಕನಿಗೆ ಥಳಿಸಿದ ಎಸಿಪಿ: ಜನ ಜಮಾಯಿಸುತ್ತಿದ್ದಂತೆ ಜೀಪಿನಿಂದ ಕೆಳಗಿಳಿಸಿದ ಪೊಲೀಸರು.. ವಿಡಿಯೋ - ಕೋಪಗೊಂಡ ಎಸಿಪಿ

🎬 Watch Now: Feature Video

thumbnail

By

Published : Sep 24, 2022, 3:43 PM IST

ಲೂಧಿಯಾನ (ಪಂಜಾಬ್​): ಎಸಿಪಿಯೊಬ್ಬರು ಅಂಗಡಿ ಮಾಲೀಕನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಪಂಜಾಬ್​ನ ಲೂಧಿಯಾನದ ಸೇಲಂ ತಬ್ರಿ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಯಾವುದೋ ವಿಷಯವಾಗಿ ಮಾತನಾಡುತ್ತಲೇ ಏಕಾಏಕಿ ಕೋಪಗೊಂಡ ಎಸಿಪಿ ಮಣಿಂದರ್ ಬೇಡಿ ಅಂಗಡಿ ಮಾಲೀಕನಿಗೆ ಲಾಠಿಯಿಂದ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲದೇ, ಆ ಅಂಗಡಿ ಮಾಲೀಕನನ್ನು ಪೊಲೀಸ್ ಸಿಬ್ಬಂದಿ ಎಳೆದು ತಮ್ಮ ಜೀಪಿಗೆ ಹತ್ತಿಸಿದ್ದಾರೆ. ನಂತರ ಜನರು ಜಮಾಯಿಸುತ್ತಿದ್ದಂತೆ ಜೀಪಿನಿಂದ ಕೆಳಗಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ವೀರೇಂದ್ರ ಬ್ರಾರ್, ವಿಡಿಯೋ ಪರಿಶೀಲಿಸಿ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಸದ್ಯ ಈ ಘಟನೆ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.