ವಿಡಿಯೋ : ಕಾರಿಗೆ ಎದುರಾಯ್ತು ಕಾಡಾನೆ.. ಫಲಿಸಿತು ಮಹಿಳೆಯ ಗಣೇಶ ಪ್ರಾರ್ಥನೆ.. - ಕಾರಿಗೆ ಎದುರಾದ ಕಾಡನೆ

🎬 Watch Now: Feature Video

thumbnail

By

Published : May 16, 2022, 12:52 PM IST

Updated : May 16, 2022, 1:37 PM IST

ಚಾಮರಾಜನಗರ : ಕಾರಿಗೆ ಕಾಡಾನೆಯೊಂದು ಎದುರಾಗಿ ಪ್ರಯಾಣಿಕರನ್ನು ಆತಂಕಕ್ಕೆ ದೂಡಿದ್ದ ಘಟನೆ ತಮಿಳುನಾಡಿನ ಗುಮಟಾಪುರ ಸಮೀಪ ನಡೆದಿದೆ. ಕಾರಿನಲ್ಲಿ ಕುಟುಂಬವೊಂದು ತಾಳವಾಡಿಯಿಂದ ಕುಂಬಾರಗುಂಡಿಗೆ ತೆರಳುತ್ತಿದ್ದಾಗ ಸಲಗವೊಂದು ರಸ್ತೆಯಲ್ಲಿ ಎದುರಾಗಿದೆ. ಕಾರನ್ನು ರಿವರ್ಸ್ ತೆಗೆದುಕೊಂಡರೂ ಆನೆ ಬರುತ್ತಿದ್ದರಿಂದ ಭಯಗೊಂಡ ಮಹಿಳೆಯೊಬ್ಬರು " ಪ್ಪಾ, ಗಣೇಶ ಹೊರಟು ಹೋಗಪ್ಪಾ, ಏನು ಮಾಡಬೇಡಪ್ಪ, ಹೊರಟು ಹೋಗು ದೇವರೇ, ದಾರಿ ಬಿಡು ದೇವರೇ" ಎಂದು ಪ್ರಾರ್ಥಿಸಿಕೊಳ್ಳುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಾಕತಾಳೀಯ ಎಂಬಂತೆ ಮಹಿಳೆ ಪ್ರಾರ್ಥನೆ ಮಾಡಿಕೊಳ್ಳುವುದಕ್ಕೂ ಆನೆ ಕಾಡಿನ ಹಾದಿ ಹಿಡಿಯುವುದಕ್ಕೂ ಸರಿ ಹೋಗಿದೆ. ಈ ಘಟನೆ ಕಳೆದ ಶನಿವಾರ ನಡೆದಿದೆ ಎಂದು ತಾಳವಾಡಿ ಪಟ್ಟಣದ ಗಣೇಶ್ ತಿಳಿಸಿದ್ದಾರೆ. ಸದ್ಯ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.
Last Updated : May 16, 2022, 1:37 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.