ದೇಗುಲದ ಗರ್ಭಗುಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ 'ಜೋಡಿ ಹಕ್ಕಿಗಳು': ವಿಡಿಯೋ - Attempted theft in a temple
🎬 Watch Now: Feature Video
ಉಡುಪಿ: ಯುವಕ ಮತ್ತು ಯುವತಿ ಮರವಂತೆ ದೇವಸ್ಥಾನದ ಗರ್ಭಗುಡಿಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿ ವಿಫಲವಾದ ಘಟನೆ ನಡೆದಿದೆ. ಕುಂದಾಪುರ ತ್ರಾಸಿ ಸಮೀಪ ಶ್ರೀ ಮಹಾರಾಜ ಸ್ವಾಮಿ, ಶ್ರೀ ವರಾಹ ದೇವಸ್ಥಾನಕ್ಕೆ ಯಾರೂ ಇಲ್ಲದ ವೇಳೆ ಈ ಇಬ್ಬರು ಬಾಗಿಲು ಒಡೆದು, ಒಳನುಗ್ಗಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವರಾಹ ವಿಷ್ಣು ನರಸಿಂಹ ದೇವರ ಮೂರ್ತಿ ಮುಟ್ಟಿ ಅಪವಿತ್ರಗೊಳಿಸಿದ ಯುವಕ ಬಳಿಕ ಏನೂ ಸಿಗದೆ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ. ಕಳ್ಳನ ಮುಖ ಚಹರೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.