ನೆಲಕ್ಕುರುಳಿದ್ದ ರೈತನ ಟೆಂಪೋ : ಮೇಲೆತ್ತಲು ಸಾಥ್ ನೀಡಿದ ಕುಣಿಗಲ್ ಶಾಸಕ ಡಾ. ರಂಗನಾಥ್ - Kunigal MLA Dr Ranganath helped in tempo accident in tumkur
🎬 Watch Now: Feature Video
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಪಿ.ಎಚ್.ಹಳ್ಳಿ ಬಳಿ ಎಳನೀರು ತುಂಬಿಕೊಂಡು ಹೋಗುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಅದೇ ಮಾರ್ಗವಾಗಿ ಸಾಗುತ್ತಿದ್ದ ಕುಣಿಗಲ್ ಶಾಸಕ ಡಾ. ರಂಗನಾಥ್ ಸೇರಿ ಸ್ಥಳೀಯರು ಟೆಂಪೋವನ್ನು ಮೇಲಕ್ಕೆತ್ತಿದ್ದಾರೆ. ಟೆಂಪೋದ ಬ್ರೇಕ್ ಸಮಸ್ಯೆಯಾಗಿ ನಡುರಸ್ತೆಯಲ್ಲೇ ನೆಲಕ್ಕುರುಳಿತ್ತು. ಟೆಂಪೋದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.