₹5 ಕೋಟಿ ಮೌಲ್ಯದ ಮದ್ಯವನ್ನು ರೋಡ್ ರೋಲರ್ ಹರಿಸಿ ನಾಶಪಡಿಸಿದ ಪೊಲೀಸರು: ವಿಡಿಯೋ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video

ವಿಜಯವಾಡ (ಆಂಧ್ರ ಪ್ರದೇಶ): ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 5.47 ಕೋಟಿ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳನ್ನು ಇಲ್ಲಿನ ವಿಜಯವಾಡ ಪೊಲೀಸರು ರೋಡ್ ರೋಲರ್ ಹರಿಸಿ ನಾಶಪಡಿಸಿದರು. ತೆಲಂಗಾಣದಿಂದ ಅಕ್ರಮವಾಗಿ ಸಾಗಿಸುತ್ತಿದ್ದಾಗ 2.43 ಲಕ್ಷ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ವಿಜಯವಾಡ ಸಿಪಿ ಕಾಂತಿ ರಾಣಾ ಟಾಟಾ ತಿಳಿಸಿದ್ದಾರೆ. ಈ ಹಿಂದೆಯೂ ಕೂಡ 2 ಕೋಟಿ ರೂ. ಮೌಲ್ಯದ ಮದ್ಯವನ್ನು ಇದೇ ರೀತಿ ಪೊಲೀಸರು ನಾಶಪಡಿಸಿ ಅಕ್ರಮ ಮದ್ಯ ಸಾಗಾಟದ ವಿರುದ್ಧ ಸಮರ ಸಾರಿದ್ದರು.
Last Updated : Sep 15, 2022, 9:07 AM IST