ದಡಕ್ಕೆ ಜಿಗಿದ ರಾಶಿ ರಾಶಿ ಸಾರ್ಡೀನ್ ಮೀನುಗಳು: ವಿಡಿಯೋ ವೈರಲ್ - trawling fishing
🎬 Watch Now: Feature Video
ಕೇರಳದ ಮಲಪ್ಪುರಂ ಜಿಲ್ಲೆಯ ತಿರೂರ್ನ ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳೊಂದಿಗೆ ರಾಶಿ ರಾಶಿ ಸಾರ್ಡೀನ್ ಮೀನುಗಳು ಚಿಮ್ಮಿ ದಡ ಸೇರುತ್ತಿದ್ದ ದೃಶ್ಯ ಜನರಲ್ಲಿ ಕುತೂಹಲ ಮೂಡಿಸಿದ್ದು, ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಟ್ರಾಲಿಂಗ್ ನಿಷೇಧ ಆರಂಭವಾದಾಗಿನಿಂದಲೂ ಸಂಕಷ್ಟಕ್ಕೆ ಸಿಲುಕ್ಕಿದ್ದ ಮೀನುಗಾರರು ನಿನ್ನೆ ಮಧ್ಯರಾತ್ರಿ ಟ್ರಾಲಿಂಗ್ ನಿಷೇಧ ಅಂತ್ಯಗೊಂಡ ಹಿನ್ನೆಲೆ ಮೀನುಗಾರಿಕೆಗೆ ತೆರಳುವ ಸಿದ್ಧತೆ ನಡೆಸಿದ್ದಾರೆ.