ಅರಮನೆಯಲ್ಲಿ ಬಾಣಂತನ ಮುಗಿಸಿ ಪುತ್ರನೊಂದಿಗೆ ತವರಿಗೆ ಮರಳಿದ ಆನೆ: ಹಸಿರು ನೋಡಿ ನಲಿದಾಡಿದ ಲಕ್ಷ್ಮಿಪುತ್ರ - ಅರಮನೆಯಲ್ಲಿ ಬಾಣಂತನ
🎬 Watch Now: Feature Video
ಚಾಮರಾಜನಗರ: ನಾಡಹಬ್ಬ ದಸರಾ ಮಹೋತ್ಸವಕ್ಕೆ ತೆರಳಿ ಗಂಡು ಮರಿಗೆ ಜನ್ಮ ನೀಡಿದ್ದ ಬಂಡೀಪುರದ ರಾಂಪುರ ಆನೆ ಶಿಬಿರದ ಲಕ್ಷ್ಮೀ ಆನೆ (21 ವರ್ಷ) ಮಗ ಶ್ರೀ ದತ್ತಾತ್ರೇಯನೊಂದಿಗೆ ತವರಿಗೆ ಹಿಂದಿರುಗಿದೆ. ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡಿದ್ದ ಸುದ್ದಿ ದಸರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿತ್ತು. ಅರಮನೆಯ ವಿಶೇಷ ಆತಿಥ್ಯ, ಆರೈಕೆ ಪಡೆದು ತವರಿಗೆ ಆನೆ ಬಂದಿಳಿದಿದೆ. ಶಿಬಿರದ ಸಿಬ್ಬಂದಿ ಮರಿ ಕಂಡು ಮತ್ತಷ್ಟು ಸಂತಸಗೊಂಡಿದ್ದಾರೆ. ಇಷ್ಟು ದಿನ ಅರಮನೆ ಒಳಗಿದ್ದ ಶ್ರೀದತ್ತಾತ್ರೇಯ ರಾಂಪುರದ ಕಾಡಿನ ಚಂದ ಕಂಡು ನಲಿದಾಡಿದ್ದಾನೆ.