ಜಾರ್ಖಂಡ್‌ನಲ್ಲಿ ಕರ್ನಾಟಕ ಭವನ ನಿರ್ಮಿಸಲಾಗುವುದು: ಸಚಿವೆ ಶಶಿಕಲಾ ಜೊಲ್ಲೆ ಭರವಸೆ - Karnataka Minister Shashikala Annasaheb Jolle
🎬 Watch Now: Feature Video
ರಾಂಚಿ(ಜಾರ್ಖಂಡ್): ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಈ ನಡುವೆಯೇ ರಾಜಕೀಯ ನಾಯಕರು ಬಂದು ಹೋಗುವ ಪ್ರಕ್ರಿಯೆ ಮುಂದುವರಿದಿದೆ. ಈ ಅನುಕ್ರಮದಲ್ಲಿ ಕರ್ನಾಟಕದ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಅವರ ಪತಿ, ಸಂಸದ ಅಣ್ಣಾಸಾಹೇಬ್ ಶಂಕರ್ ಕೂಡ ರಾಂಚಿಗೆ ಭೇಟಿ ನೀಡಿದ್ದಾರೆ. ಈ ವೇಳೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಜಾರ್ಖಂಡ್ - ಕರ್ನಾಟಕದ ನಡುವೆ ಅನೇಕರು ಬಂದು ಹೋಗುತ್ತಲೇ ಇರುತ್ತಾರೆ. ಅನೇಕ ಧಾರ್ಮಿಕ ಮುಖಂಡರು ಜಾರ್ಖಂಡ್‌ನ ಮಧುಬನ್‌ನಲ್ಲಿ ದೀರ್ಘಕಾಲ ಕಳೆಯುತ್ತಾರೆ. ಇಲ್ಲಿ ಉಳಿದುಕೊಳ್ಳಲು ಕರ್ನಾಟಕದ ಅನೇಕ ಭಕ್ತರು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಜಾರ್ಖಂಡ್‌ನಲ್ಲಿ ಕರ್ನಾಟಕ ಭವನ ನಿರ್ಮಿಸಲಾಗುವುದು. ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.