ಕಾರ ಹುಣ್ಣಿಮೆ ಸಂಭ್ರಮ: ಸರಪಳಿ ಹರಿಯುವ ಪವಾಡ ಕಣ್ತುಂಬಿಕೊಂಡ ಜನ - ಕಾರ ಹುಣ್ಣಿಮೆ ಸಂಭ್ರಮ
🎬 Watch Now: Feature Video

ಹಾವೇರಿ: ಕಾರ ಹುಣ್ಣಿಮೆ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಲ್ಲತ್ತಿ ಗ್ರಾಮದಲ್ಲಿ ಸರಪಳಿ ಹರಿಯುವ ಪವಾಡ ನಡೆಯಿತು. ಗ್ರಾಮದ ಮೈಲಾರಲಿಂಗೇಶ್ವರನ ಶಿಬಾರದ ಹತ್ತಿರ ಬಾಲಗೊರವಪ್ಪಜ್ಜ ಸರಪಳಿ ಹರಿಯುವ ಮೂಲಕ ಪವಾಡ ಮಾಡಿದರು. ಗೂಟಕ್ಕೆ ಕಟ್ಟಿದ ಸರಪಳಿಯನ್ನು ಏಳು ಕೋಟಿ ಏಳು ಕೋಟಿ ಅನ್ನುತ್ತಲೇ ಬಾಲಗೊರವಪ್ಪಜ್ಜ ಹರಿಯುತ್ತಾನೆ. ಪ್ರತಿ ವರ್ಷ ಕಾರ ಹುಣ್ಣಿಮೆ ವೇಳೆ ದೇವಸ್ಥಾನದ ಶಿಬಾರದಲ್ಲಿ ಈ ಪವಾಡ ನಡೆಸಲಾಗುತ್ತದೆ.