ನಿಮ್ಮ ಪುಂಗಿ ನಮ್ಮ ಕಡೆ ನಡೆಯೋದಿಲ್ಲ: ಗಣೇಶ ಮಂಡಳಿಗಳಿಗೆ ಇನ್ಸ್‌ಪೆಕ್ಟರ್ ಸಜ್ಜನರ್ ಎಚ್ಚರಿಕೆ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video

ನಾವು ನಮ್ಮ ಪುಂಗಿ ಊದುತ್ತೇವೆ. ನಮ್ಮ ಪುಂಗಿ ಮುಂದ ನಿಮ್ಮ ಪುಂಗಿ ನಡಿಯೋದಿಲ್ಲ ಎಂದು ಗಣೇಶ ಮಂಡಳಿಗಳಿಗೆ ಪೊಲೀಸ್ ಅಧಿಕಾರಿ ಶಾಮರಾವ್ ಸಜ್ಜನರ್ ಹೇಳಿರುವ ವಿಡಿಯೋ ವೈರಲ್ ಆಗಿದೆ. ನಗರದ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಜ್ಜನರ್ ಅವರು ತಮ್ಮದೇ ಆದ ಶೈಲಿಯಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಎಚ್ಚರಿಕೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗಣೇಶ ನಿಮಜ್ಜನ ಮೆರವಣಿಗೆಯಲ್ಲಿ ಡಿಜೆ ಹಚ್ಚಲು ಅವಕಾಶ ನೀಡುವುದಿಲ್ಲ ಎಂಬ ಎಚ್ಚರಿಕೆ ನೀಡಿರುವ ಇನ್ಸ್‌ಪೆಕ್ಟರ್ ಸಜ್ಜನರ್ ಅವರು, ಪರೋಕ್ಷವಾಗಿ ಪೊಲೀಸರ ಎದುರು ಯಾರೂ ಏನೂ ನಡೆಯೋದಿಲ್ಲ ಎಂದು ಹೇಳಿರುವ ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.