ಶ್ರೀಲಂಕಾ ವಾಯುಪಡೆಗೆ ಡಾರ್ನಿಯರ್ ವಿಮಾನ ಗಿಫ್ಟ್ ನೀಡಿದ ಭಾರತ - ಭಾರತದಿಂದ ವಿಮಾನ ಗಿಫ್ಟ್
🎬 Watch Now: Feature Video
ಕೊಲಂಬೊ (ಶ್ರೀಲಂಕಾ): ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾಗೆ ಸ್ವಾತಂತ್ರ್ಯೋತ್ಸವ ದಿನವೇ ಭಾರತವು ಡಾರ್ನಿಯರ್ ನೌಕಾ ವಿಚಕ್ಷಣಾ ವಿಮಾನವನ್ನು ಉಡುಗೊರೆಯಾಗಿ ನೀಡಿದೆ. ಸಮುದ್ರದಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ವಿಮಾನ ನೀಡಿದ್ದು, ಕೊಲಂಬೊ ಸಮೀಪದ ಕಟುನಾಯಕೆ ವಾಯುಪಡೆ ನೆಲೆಯಲ್ಲಿ ಹಸ್ತಾಂತರ ಕಾರ್ಯಕ್ರಮ ನಡೆಯಿತು. ವಿಮಾನವನ್ನು ವಾಟರ್ ಸೆಲ್ಯೂಟ್ ಮೂಲಕ ಶ್ರೀಲಂಕಾದ ವಾಯುಪಡೆ ಸ್ವೀಕರಿಸಿದೆ. ಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಭಾರತೀಯ ನೌಕಾಪಡೆಯ ಉಪ ಅಡ್ಮಿರಲ್ ಎಸ್.ಎನ್.ಘೋರ್ಮಾಡೆ, ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.