ಸಂತೋಷ ಲಾಡ್ ಫೌಂಡೇಶನ್ನಿಂದ ಕಲಘಟಗಿಯಲ್ಲಿ ಎಂಟೂವರೆ ಕಿ.ಮೀ. ಉದ್ದದ ತ್ರಿವರ್ಣ ಧ್ವಜ ಜಾಥ - ಈಟಿವಿ ಭಾರತ್ ಕರ್ನಾಟಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16108973-thumbnail-3x2-bng.jpeg)
ಧಾರವಾಡ : ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ 8.5 ಕಿ.ಮೀ ಉದ್ದದ ತ್ರಿವರ್ಣ ಧ್ವಜದ ರ್ಯಾಲಿ ಮಾಡಿದರು. ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಸ್ವಾತಂತ್ರ್ಯ ಭಾರತದ 75 ನೇ ವರ್ಷದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಲಘಟಗಿ ಹೊರವಲಯದ ದಾಸ್ತಿಕೊಪ್ಪ ಬ್ರಿಡ್ಜ್ನಿಂದ ಬೆಳಗ್ಗೆ 9ಕ್ಕೆ ಧ್ವಜ ಜಾಥ ಆರಂಭವಾಗಿ ಕಲಘಟಗಿ ಪಟ್ಟಣದ ಮೂಲಕ ಗಳಗಿನಗಟ್ಟಿ ಕ್ರಾಸ್ ವರೆಗೆ ಜರುಗಿತು. ತ್ರಿವರ್ಣ ಯಾತ್ರೆಗೆ ಬಳಸಿದ ರಾಷ್ಟ್ರಧ್ವಜ ಬರೋಬ್ಬರಿ 8.5 ಕಿ.ಮೀ ಉದ್ದ ಹಾಗೂ 9 ಅಡಿ ಅಗಲವಿದೆ. ಬೆಂಗಳೂರಿನಲ್ಲಿ 200 ಕಾರ್ಮಿಕರು ಒಂದು ತಿಂಗಳಲ್ಲಿ ಈ ಧ್ವಜ ತಯಾರಿಸಿದ್ದಾರೆ.