ಶೃಂಗೇರಿಯಲ್ಲಿ ಮನೆ ಬಳಿ ಬೀಡುಬಿಟ್ಟಿದ್ದ 15 ಅಡಿ ಉದ್ದದ ಕಾಳಿಂಗ! - ನೀರು ಕುಡಿಸಿ ಕಾಡಿಗೆ ಬಿಟ್ಟುರಗ ತಜ್ಞ
🎬 Watch Now: Feature Video
ಮನೆಯ ಬಳಿ 15 ದಿನಗಳಿಂದ ಬೀಡುಬಿಟ್ಟಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞರ ಸಹಾಯದಿಂದ ಸೆರೆ ಹಿಡಿದಿರುವ ಘಟನೆ ಶೃಂಗೇರಿ ತಾಲೂಕಿನ ಹೊಸಂಬಳ್ಳಿ ತೆಕ್ಕೂರು ಗ್ರಾಮದಲ್ಲಿರುವ ವಕೀಲ ಮಹೇಶ್ ಎಂಬುವರ ತೋಟದಲ್ಲಿ ನಡೆದಿದೆ. ಮನೆಯವರು ಕೆರೆ ಹಾವು ಇರಬಹುದು ಎಂದು ಭಾವಿಸಿದ್ದರಂತೆ. ಆದರೆ ಅದರ ಗಾತ್ರ ನೋಡಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಬೆಚ್ಚಿಬಿದ್ದಿದ್ದು, ಕೂಡಲೇ ಶೃಂಗೇರಿಯ ಸ್ನೇಕ್ ಅರ್ಜುನ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಹಾವನ್ನು ಹಿಡಿದು ನೀರು ಕುಡಿಸಿ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.