ಕೃಷಿಯಲ್ಲಿ ‘ಪ್ರಕಾಶ’ ಕಂಡ ಇವರು ಯುವಜನತೆಗೆ ಸ್ಫೂರ್ತಿ - kannadanews
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3642635-thumbnail-3x2-surya.jpg)
ರಾಯಚೂರು ತಾಲೂಕಿನ ಮಿರ್ಜಾಪುರ ಗ್ರಾಮದ ನಿವಾಸಿ ಪ್ರಕಾಶ್, ಬಿಎಸ್ಸಿ ಅಗ್ರಿಕಲ್ಚರ್ ಶಿಕ್ಷಣ ಪಡೆದು ಯಾರೊಬ್ಬರಿಗೂ ಅಡಿಯಾಳಾಗುವುದಕ್ಕೆ ಇಚ್ಚಿಸದೆ ತಮ್ಮ ಲೆಕ್ಕವನ್ನು ತಾವೇ ಬರೆಯಲು ಹೊರಟವರು. ತಾವು ಕಲಿತ ವಿದ್ಯೆಯನ್ನೇ ಬಂಡವಾಳವಾಗಿಸಿಕೊಂಡ ಇವರು ಕೃಷಿಯಲ್ಲಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಮೊದಲಿಗೆ ಮನೆಯಲ್ಲೇ ಬೊನ್ಸಾಯ್ ಗಿಡಗಳನ್ನ ಬೆಳೆಸೋಕೆ ಶುರು ಮಾಡಿದ್ರಂತೆ. ಅದಕ್ಕೆ ಉತ್ತಮ ಜನ ಸ್ಪಂದನೆ ಸಿಕ್ಕಿದ್ರಿಂದ ಆ ಭಾಗದಲ್ಲಿ ಒಂದು ಪ್ಲಾಂಟೇಶನ್ ನಿರ್ಮಿಸೋಕೆ ಮುಂದಾದ್ರಂತೆ. ತನ್ನ ಸ್ನೇಹಿತನ ಜಮೀನನ್ನು ಬಾಡಿಗೆ ಪಡೆದು ನರ್ಸರಿ ಪ್ಲಾಂಟ್ ಮಾಡಿದ್ದಾರೆ.