ಉಪಸಭಾಪತಿ ವಿತರಿಸಿದ ಟೀ ನಿರಾಕರಿಸಿದ ಧರಣಿನಿರತ ಸದಸ್ಯರು..! - ರಾಜ್ಯಸಭೆಯಲ್ಲಿ ಸಂಸದರ ಅಮಾನತು
🎬 Watch Now: Feature Video
ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಅಮಾನತಾದ ಸದಸ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇದೇ ವೇಳೆ ಸ್ವತಃ ತಾವೇ ಧರಣಿ ನಿರತರಿಗೆ ಟೀ ನೀಡಲು ಮುಂದಾದರು. ಆದ್ರೆ ಸದಸ್ಯರು ಮಾತ್ರ ಟೀಯನ್ನು ನಿರಾಕರಿಸಿದರು. ರಾಜ್ಯಸಭೆಯಲ್ಲಿ ಗಲಾಟೆ ಮಾಡಿದ 8 ಮಂದಿ ಸದಸ್ಯರನ್ನು ಸಭಾಪತಿ ವೆಂಕಯ್ಯ ನಾಯ್ಡು ಅಮಾನತುಗೊಳಿಸಿ ಸೋಮವಾರ ಆದೇಶ ಹೊರಡಿಸಿದ್ದರು. ಇದರಿಂದ ಕೆರಳಿರುವ 8 ಮಂದಿ ಸದಸ್ಯರು ಸಂಸತ್ ಭವನದ ಆವರಣದಲ್ಲಿ ಧರಣಿ ನಡೆಸಿದ್ದಾರೆ.
Last Updated : Sep 22, 2020, 9:58 AM IST