ಗಂಗಾ ನದಿ ಪ್ರವಾಹದಿಂದ ನಿಂತ ನೀರಿನಲ್ಲಿ ವೈಭವದ ಗಂಗಾ ಆರತಿ.. ವಿಡಿಯೋ - ‘ದೂರದ ಊರಿನಿಂದ ಬಂದ ಭಕ್ತರಿಗೆ ಇದು ನಿರಾಸೆ
🎬 Watch Now: Feature Video
ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗಂಗಾನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ನಿತ್ಯ ನಡೆಯುವ ವೈಭೋಗದ ಗಂಗಾ ಆರತಿಯನ್ನು ನದಿ ಬಳಿ ಮಾಡಲಾಗದೇ ಜನವಸತಿಯಡೆಗೆ ನುಗ್ಗಿ ಬಂದ ನೀರಿನಲ್ಲಿ ನೆರವೇರಿಸಲಾಗುತ್ತಿದೆ. ದೂರದ ಊರಿನಿಂದ ಬಂದ ಭಕ್ತರಿಗೆ ಇದು ನಿರಾಸೆ ತಂದಿದೆ. ವೈಭವದ ಗಂಗಾರತಿಯನ್ನು ಕಣ್ತುಂಬಿಕೊಳ್ಳಲು ಬಂದ ಭಕ್ತರು ನಿಂತ ನೀರಿನಲ್ಲಿ ನಡೆಯುವ ಪೂಜೆಯಲ್ಲಿ ಭಾಗವಹಿಸುತ್ತಿದ್ದಾರೆ. ವಾರಾಣಸಿಯಲ್ಲಿ ಗಂಗಾನದಿಯ ನೀರಿನ ಮಟ್ಟ 71.26 ಮೀಟರ್‌ನಷ್ಟು ಏರಿಕೆ ಕಂಡಿದ್ದು. ಅಪಾಯದ ಮಟ್ಟಕ್ಕಿಂತಲೂ ಹೆಚ್ಚಾಗಿದೆ.