UPSCಯಲ್ಲಿ 3ನೇ ರ್‍ಯಾಂಕ್ ಪಡೆದ ಖುಷಿ.. ಕುಟುಂಬಸ್ಥರೊಂದಿಗೆ ಕುಣಿದು ಕುಪ್ಪಳಿಸಿದ ಗಾಮಿನಿ - ಯುಪಿಎಸ್ಸಿ ಮೂರನೇ ಸ್ಥಾನ
🎬 Watch Now: Feature Video
ಚಂಡೀಗಢ: ಕೇಂದ್ರ ಲೋಕಸೇವಾ ಆಯೋಗ ಬಿಡುಗಡೆ ಮಾಡಿರುವ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಚಂಡೀಗಢನ ಗಾಮಿನಿ ಸಿಂಗ್ಲಾ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಅತ್ಯುತ್ತಮ ಸಾಧನೆ ಮಾಡಿರುವ ಗಾಮಿನಿ ಇದೀಗ ಕುಟುಂಬದ ಸದಸ್ಯರೊಂದಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಕಠಿಣ ಪರೀಕ್ಷೆಯಲ್ಲಿ ಮೂರನೇ ರ್‍ಯಾಂಕ್ ಪಡೆದಿರುವ ಗಾಮಿನಿ, ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಪಂಜಾಬ್‌ನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಗಾಮಿನಿ ಸಿಂಗ್ಲಾ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.