ಮಾಜಿ ಸಿಎಂ ಬೆಂಗಾವಲು ಪಡೆ ಮೇಲೆ ಆನೆ ದಾಳಿ.. ಗಜರಾಜನಿಗೆ ಹೆದರಿ ಬಂಡೆ ಏರಿದ್ರು ರಾವತ್: ವಿಡಿಯೋ - ಕೋಟ್‌ದ್ವಾರ ದುಗಡ್ಡ ಪ್ರದೇಶದಲ್ಲಿ ಆನೆ ದಾಳಿ
🎬 Watch Now: Feature Video
ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಅವರ ಬೆಂಗಾವಲು ಪಡೆಯ ಮೇಲೆ ಆನೆಯೊಂದು ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ದೊಡ್ಡ ಬಂಡೆಗಲ್ಲು ಹತ್ತಿದ ರಾವತ್ ಜೀವ ಉಳಿಸಿಕೊಂಡಿದ್ದಾರೆ. ಇಲ್ಲಿನ ಕೋಟ್‌ದ್ವಾರ- ದುಗಡ್ಡ ಪ್ರದೇಶದಲ್ಲಿ ಪ್ರವಾಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ಹೆದ್ದಾರಿಯ ಮೇಲೆ ಕಾಡಾನೆಯೊಂದು ಏಕಾಏಕಿ ಕಾಣಿಸಿಕೊಂಡಿದೆ. ಜನರು ಮತ್ತು ಕಾರನ್ನು ಕಂಡ ಆನೆ ದಾಳಿಗೆ ಮುಂದಾದಾಗ, ಕಾರಲ್ಲಿದ್ದ ತ್ರಿವೇಂದ್ರ ಸಿಂಗ್ ರಾವತ್ ಮತ್ತು ಬೆಂಗಾವಲು ಸಿಬ್ಬಂದಿ ಓಡಿ ಹೋಗಿದ್ದಾರೆ. ಇಷ್ಟಾದರೂ ಬಿಡದ ಆನೆ ಅಟ್ಟಿಸಿಕೊಂಡು ಹೋಗಿದೆ. ಈ ವೇಳೆ ಎಲ್ಲರೂ ದೊಡ್ಡ ಬಂಡೆಗಲ್ಲು ಹತ್ತಿ ಕುಳಿತಿದ್ದಾರೆ. ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಗುಂಡು ಹಾರಿಸಿ ಆನೆಯನ್ನು ಓಡಿಸಿದ್ದಾರೆ. ಬಳಿಕ ಅಲ್ಲಿಂದ ಇಳಿದ ಮಾಜಿ ಸಿಎಂ ಕಾರು ಹತ್ತಿ ಹೊರಟಿದ್ದಾರೆ.