ಧರ್ಮದ ಹಂಗು ತೊರೆದು ಸೋಂಕಿತರ ಅಂತ್ಯಕ್ರಿಯೆ ನೆರವೇರಿಸ್ತಿದೆ ಮುಸ್ಲಿಂ ಯುವಕರ ತಂಡ
🎬 Watch Now: Feature Video
ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರ ಕುಟುಂಬ ಸದಸ್ಯರುಗಳೇ ಮೃತದೇಹದ ಅಂತ್ಯಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿರುವ ಈ ಸಂದರ್ಭದಲ್ಲಿ ತುಮಕೂರಿನಲ್ಲಿ ಮುಸ್ಲಿಂ ಸಮುದಾಯದ 12 ಯುವಕರ ತಂಡ ಅಂತ್ಯಕ್ರಿಯೆಗೆ ಕುಟುಂಬಸ್ಥರ ಜೊತೆ ಕೈಜೋಡಿಸುತ್ತಿದೆ. ಮುಸ್ಲಿಂ ಹಾಗೂ ಹಿಂದೂ ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸುವಲ್ಲಿ ಈ ತಂಡ ಯಶಸ್ವಿಯಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ತಂಡದ ಸದಸ್ಯ ತಾಜುದ್ದೀನ್ ಷರೀಫ್ ಅವರೊಂದಿಗೆ ನಡೆಸಿದ ಚಿಟ್ಚಾಟ್ ಇಲ್ಲಿದೆ ನೋಡಿ.