ವಾಷಿಂಗ್ಟನ್ ಡಿಸಿ: ಭಾರತದ ಮತ ಎಣಿಕೆ ಪ್ರಕ್ರಿಯೆಯ ಬಗ್ಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಸ್ಕ್ ಮಾಡಿರುವ 'ಎಕ್ಸ್' ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆ ಹಾಗೂ 14 ರಾಜ್ಯಗಳ 48 ವಿಧಾನಸಭಾ ಹಾಗೂ 2 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶನಿವಾರ ಒಂದೇ ದಿನದಲ್ಲಿ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಎಲಾನ್ ಮಸ್ಕ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಕ್ಯಾಲಿಫೋರ್ನಿಯಾದ ಮತ ಎಣಿಕೆಯ ಜೊತೆಗೆ ಹೋಲಿಕೆ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
India counted 640 million votes in 1 day.
— Elon Musk (@elonmusk) November 24, 2024
California is still counting votes 🤦♂️ https://t.co/ai8JmWxas6
ಭಾರತ 1 ದಿನದಲ್ಲಿ 640 ಮಿಲಿಯನ್ ಮತಗಳನ್ನು ಎಣಿಕೆ ಮಾಡಿದೆ. ಆದರೆ ಕ್ಯಾಲಿಫೋರ್ನಿಯಾದಲ್ಲಿ ಮತದಾನ ನಡೆದು 2 ವಾರಗಳ ನಂತರವೂ ಎಣಿಕೆ ನಡೆಯುತ್ತಲೇ ಇದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಇದು ಭಾರತದಲ್ಲಿನ ಮತದಾನ, ಎಣಿಕೆ ಪ್ರಕ್ರಿಯೆಗಳಿಗೆ ವ್ಯತಿರಿಕ್ತವಾಗಿದೆ ಎಂದು ಪೋಸ್ಟ್ನಲ್ಲಿ ಟೀಕಿಸಿದ್ದಾರೆ. ಜೊತೆಗೆ, ತಲೆಗೆ ಹೊಡೆದುಕೊಳ್ಳುವ (ಕರ್ಮವೇ ಎಂಬ ಸಂಕೇತದ) ಎನ್ನುವ ಇಮೋಜಿಯನ್ನೂ ಹಾಕಿಕೊಂಡಿದ್ದಾರೆ.
'ಎಕ್ಸ್' ಬಳಕೆದಾರರೊಬ್ಬರ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿರುವ ಎಲಾನ್ ಮಸ್ಕ್, "ದುರಂತ" ಎಂದು ಬರೆದುಕೊಂಡಿದ್ದಾರೆ.
Tragic https://t.co/K7pjfWhg6D
— Elon Musk (@elonmusk) November 24, 2024
ಅಮೆರಿಕದ ಅತಿದೊಡ್ಡ ನಗರವಾಗಿರುವ ಕ್ಯಾಲಿಫೋರ್ನಿಯಾದಲ್ಲಿ ನವೆಂಬರ್ 5ರಂದು ಮತದಾನ ನಡೆದಿತ್ತು. ಮತದಾನ ನಡೆದು 20 ದಿನಗಳಾಗಿದ್ದು, 98 ಶೇಕಡಾ ಎಣಿಕೆ ಮುಗಿದಿದೆ. ಆದರೆ ಫಲಿತಾಂಶಗಳನ್ನು ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.
ಇದನ್ನೂ ಓದಿ: ಎಲಾನ್ ಮಸ್ಕ್ಗೆ ಬಿಗ್ ಶಾಕ್; ಎಕ್ಸ್ ತೊರೆದು ಬ್ಲೂ ಸ್ಕೈನತ್ತ ವಾಲುತ್ತಿರುವ ಬಳಕೆದಾರರು, ಕಾರಣವೇನು?