ಕರಾವಳಿ ಕಾಪುವಿನಲ್ಲಿ ಮೀನುಗಾರರಿಗೆ ಭೂತಾಯಿ ಸುಗ್ಗಿ: ಟನ್‌ಗಟ್ಟಲೆ ಮೀನು ಬಲೆಗೆ - ಕಾಪು ಕೈಪುಂಜಾಲು ಓಂ ಸಾಗರ್ ಜೋಡು ದೋಣಿ
🎬 Watch Now: Feature Video
ಇಂದು ಮಧ್ಯಾಹ್ನ ಕಾಪು ಕೈಪುಂಜಾಲು ಓಂ ಸಾಗರ್ ಜೋಡು ದೋಣಿಗೆ ಭರ್ಜರಿ ಭೂತಾಯಿ ಮೀನು ಸಿಕ್ಕಿದೆ. ಬಲೆಗೆ ಟನ್‌ಗಟ್ಟಲೆ ಭೂತಾಯಿ ಮೀನು ಬಿದ್ದಿದೆ. ಸುಮಾರು 30 ಟನ್ಗೂ ಅಧಿಕ ಭೂತಾಯಿ ಮೀನು ಬಲೆಗೆ ಬಿದ್ದಿದ್ದು, ಅಂದಾಜು 30 ಲಕ್ಷ ರೂಪಾಯಿಗೂ ಹೆಚ್ಚಿನ ಬೆಲೆಗೆ ಮೀನು ಮಾರಾಟವಾಗಿದೆ. ಅಸಾನಿ ಚಂಡಮಾರುತದಿಂದ ಕಡಲು ಪ್ರಕ್ಷುಬ್ಧವಾಗಿದ್ದು, ಗಂಗೊಳ್ಳಿಯಿಂದ ಮಂಗಳೂರು ಕರಾವಳಿಯವರೆಗೆ ಭೂತಾಯಿ ಮೀನಿನ ಚಲನವಲನ ಕಂಡು ಬರುತ್ತಿದೆ. ಸಾಮೂಹಿಕವಾಗಿ ಬಲೆಗೆ ಬಿದ್ದ ಭೂತಾಯಿ ಮೀನು ರಾಶಿಗೆ ಮೀನುಗಾರರು ಖುಷಿಯಾಗಿದ್ದಾರೆ.