ಬಂಡೀಪುರ ರಸ್ತೆಬದಿ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ : ಕೂದಲೆಳೆಯಲ್ಲಿ ಪಾರು - ಬಂಡೀಪುರ ರಸ್ತೆಬದಿ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ
🎬 Watch Now: Feature Video
ಕೂದಲೆಳೆ ಅಂತರದಲ್ಲಿ ಪ್ರವಾಸಿಗನೋರ್ವ ಆನೆ ದಾಳಿಯಿಂದ ಬಚಾವ್ ಆಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದ ಬ್ರಿಡ್ಜ್ ಬಳಿ ನಡೆದಿದೆ. ಕೇರಳಕ್ಕೆ ಈ ರಸ್ತೆ ಸಂಪರ್ಕಿಸುತ್ತೆ. ಬ್ರಿಡ್ಜ್ ಹತ್ತಿರ ಎಡಭಾಗದಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜಿಸಲು ಬಲ ಭಾಗಕ್ಕೆ ಹೋಗಿದ್ದಾಗ ಆನೆ ಬರುವುದನ್ನು ಕಂಡು ಜೊತೆಯಲ್ಲಿ ಇದ್ದವರು ಕಾರು ಹತ್ತಿದ್ದಾರೆ. ಬಳಿಕ ಆನೆ ಬಲ ಭಾಗದಲ್ಲಿ ಇದ್ದ ವ್ಯಕ್ತಿಯನ್ನು ದಾಳಿ ಮಾಡಲು ಯತ್ನಿಸಿದಾಗ ವ್ಯಕ್ತಿ ಓಡಿ ಹೋಗಿದ್ದಾನೆ. ಕಾರಿನ ಬಾಗಿಲು ಬಳಿ ಹೋಗುತ್ತಿದ್ದಂತೆ ಬಿದ್ದಿದ್ದಾನೆ. ಸದ್ಯ ಕಾರಿನಲ್ಲಿದ್ದವರು ಒಳಗೆ ಎಳೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮುಂದಾದರೂ ಸಿಎಫ್ ಹಾಗೂ ಎಸಿಎಫ್ಗಳು ಕರೆ ಸ್ವೀಕರಿಸಿಲ್ಲ.