ಕಬ್ಬಿಗಾಗಿ ಒಂದು ಗಂಟೆ ತಮಿಳುನಾಡು-ಕರ್ನಾಟಕ ಹೆದ್ದಾರಿ ಬಂದ್ ಮಾಡಿದ ಕಾಡಾನೆ-ವಿಡಿಯೋ - ತಮಿಳುನಾಡು ಕರ್ನಾಟಕ ಹೆದ್ದಾರಿ ಬಂದ್ ಮಾಡಿದ ಕಾಡಾನೆ
🎬 Watch Now: Feature Video

ತಮಿಳುನಾಡಿನ ಈರೋಡ್ನಲ್ಲಿ ಆನೆಯೊಂದು ಕಬ್ಬಿಗಾಗಿ 1 ಗಂಟೆ ಕಾಲ ರಸ್ತೆ ಸಂಚಾರವನ್ನೇ ಬಂದ್ ಮಾಡಿದೆ. ಕರಪಳ್ಳಂ ಚೆಕ್ಪೋಸ್ಟ್ ಬಳಿ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ ಕಾಡಾನೆ ಸೊಂಡಿಲಿನಿಂದ ಕಬ್ಬನ್ನು ಎಳೆದು ತಿನ್ನುತ್ತಾ ನಿಂತಿದೆ. ಇದರಿಂದ ವಾಹನಗಳು ರಸ್ತೆಯಲ್ಲೇ ನಿಲ್ಲಬೇಕಾಯಿತು. ಬಳಿಕ ಲಾರಿ ಚಾಲಕ ಕಬ್ಬಿನ ಮೂಟೆಯನ್ನು ರಸ್ತೆ ಬಳಿ ಬಿಸಾಡಿದ ನಂತರ ಆನೆ ಅಲ್ಲಿಂದ ಕಾಲ್ಕಿತ್ತಿದೆ. ಆನೆಯ ಕಬ್ಬಿನಾಸೆಗೆ ತಮಿಳುನಾಡು- ಕರ್ನಾಟಕ ಹೆದ್ದಾರಿಯಲ್ಲಿ ಒಂದು ಗಂಟೆ ಸಂಚಾರ ದಟ್ಟಣೆ ಉಂಟಾಗಿತ್ತು.