ರೇಷನ್ ಕಿಟ್ ವಿತರಣೆ ವೇಳೆ ಗುಂಪಿನಲ್ಲಿ ಗೋವಿಂದ ಎಂದ ಶಾಸಕ ಸೋಮಶೇಖರರೆಡ್ಡಿ..! - ಸಾಮಾಜಿಕ ಅಂತರವಿಲ್ಲದೇ ರೇಷನ್ ಕಿಟ್ ವಿತರಿಸಿದ ಶಾಸಕ ಸೋಮಶೇಖರರೆಡ್ಡಿ
🎬 Watch Now: Feature Video
ಬಳ್ಳಾರಿ: ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ರೇಷನ್ ಕಿಟ್ ವಿತರಿಸಿದರು. ಮಹಾನಗರ ಪಾಲಿಕೆ ಕಚೇರಿಯ ಸಭಾಂಗಣದಲ್ಲಿ ಗುಂಪಾಗಿದ್ದ ಪೌರ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಿದ್ದಾರೆ. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ಸೇರಿದಂತೆ ನೂರಾರು ಪೌರಕಾರ್ಮಿಕರು ಪಾಲ್ಗೊಂಡಿದ್ದು, ಯಾರೂ ಕೂಡ ಮಾಸ್ಕ್ ಧರಿಸಿರಲಿಲ್ಲ.