ಹುಣ್ಣಿಮೆ ಎಫೆಕ್ಟ್: ಸಿಗದ ನಂಜುಂಡೇಶ್ವರನ ದರ್ಶನ, ಹೊರಗೇ ಪೂಜೆ ಸಲ್ಲಿಸಿದ ಭಕ್ತರು - nanjundeshwara darshan
🎬 Watch Now: Feature Video
ಮೈಸೂರು: ಸೀಗೆ ಹುಣ್ಣಿಮೆಯಂದು ನಂಜುಂಡೇಶ್ವರನ ದರ್ಶನ ಪಡೆದರೆ ಒಳಿತಾಗಲಿದೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆ ಭಾನುವಾರ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ನಂಜುಂಡೇಶ್ವರ ದೇವಾಲಯಕ್ಕೆ ಬಂದಿದ್ದರು. ಬೆಳಗ್ಗೆ ಬಂದ ಭಕ್ತರು ದೇವರ ದರ್ಶನ ಪಡೆದರು. ಆದ್ರೆ, ಮಧ್ಯಾಹ್ನದ ನಂತರ ಬಂದ ಭಕ್ತರು ಸಂಜೆಯಾದರೂ ನಂಜುಂಡೇಶ್ವರನ ದರ್ಶನ ಸಿಗದೇ ಬೇಸರದಿಂದ ಹೊರಗಡೆ ನಿಂತು ಪೂಜೆ ಸಲ್ಲಿಸಿದರು. ದಸರಾ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಮೈಸೂರಿನ ಐತಿಹಾಸಿಕ ದೇವಾಲಯಗಳಿಗೆ ಭಕ್ತರ ಭೇಟಿ ಹೆಚ್ಚಳವಾಗಿದೆ.