ಅಗ್ನಿಶಾಮಕ ದಳದ ಪ್ರಾತ್ಯಕ್ಷಿಕೆಗೆ ಸಾರ್ವಜನಿಕರಿಂದ ಮೆಚ್ಚುಗೆ - ಮೈಸೂರು ನಗರದ ಬನ್ನಿಮಂಟಪದ ಕವಾಯತು ಮೈದಾನ
🎬 Watch Now: Feature Video
ಅಗ್ನಿ ಅವಘಡಗಳು ಸಂಭವಿಸಿದಾಗ ವಿಷಯ ಮುಟ್ಟಿದ ಕೂಡಲೇ ಸ್ಥಳಕ್ಕಾಗಮಿಸುವ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆಗಿಳಿಯುವ ಕಾರ್ಯವೈಖರಿಯ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು. ಮೈಸೂರು ನಗರದ ಬನ್ನಿ ಮಂಟಪದ ಕವಾಯತು ಮೈದಾನದಲ್ಲಿ ಏರ್ ಶೋ ನಂತರ ಅಗ್ನಿಶಾಮಕ ದಳ ನೀಡಿದ ಪ್ರಾತ್ಯಕ್ಷಿಕೆಗೆ ಜನರಿಂದ ಮೆಚ್ಚಿಗೆ ವ್ಯಕ್ತವಾಯಿತು. ಗ್ಯಾಸ್ ಟ್ಯಾಂಕರ್, ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದಾಗ ಬೆಂಕಿ ವ್ಯಾಪಿಸದಂತೆ ಹೇಗೆ ನಂದಿಸಬೇಕು ಎಂಬ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು.