ಕೈ ತಪ್ಪಿದ ಏಷ್ಯಾಕಪ್: ಡ್ಯಾಶಿಂಗ್ ಬ್ಯಾಟರ್ ಇಶಾನ್ ಕಿಶನ್ ಹೇಳಿದ್ದೇನು? - ಈಟಿವಿ ಭಾರತ ಕರ್ನಾಟಕ
🎬 Watch Now: Feature Video
ಪಾಟ್ನಾ(ಬಿಹಾರ): ಮಹತ್ವದ ಏಷ್ಯಾಕಪ್ ಟೂರ್ನಿಗೋಸ್ಕರ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ತಂಡದಲ್ಲಿ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಸೇರಿ ಕೆಲ ಹಿರಿಯ ಪ್ಲೇಯರ್ಸ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೇ ಕಾರಣಕ್ಕಾಗಿ ಯಂಗ್ ಡ್ಯಾಶಿಂಗ್ ಬ್ಯಾಟರ್ ಇಶಾನ್ ಕಿಶನ್ಗೆ ಅವಕಾಶ ದೊರೆತಿಲ್ಲ. ಈ ವಿಚಾರವಾಗಿ ಕಳೆದ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಮೂಲಕ ನೋವು ಹೊರಹಾಕಿದ್ದ ಈ ಪ್ಲೇಯರ್ ಇದೀಗ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ತಂಡಕ್ಕಾಗಿ ಆಟಗಾರರನ್ನು ಆಯ್ಕೆ ಮಾಡುವ ಮುನ್ನ ಆಯ್ಕೆದಾರರು ಬಹಳಷ್ಟು ವಿಚಾರ ಮಾಡುತ್ತಾರೆ. ನಾನು ಆಯ್ಕೆಯಾಗದಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಇದು ನನಗೆ ಧನಾತ್ಮಕ ವಿಷಯ. ಮತ್ತಷ್ಟು ಕೆಲಸ ಮಾಡಿ, ಆಯ್ಕೆಗಾರರ ವಿಶ್ವಾಸ ಗೆಲ್ಲುತ್ತೇನೆ ಎಂದಿದ್ದಾರೆ.