ಹೂಮಳೆ ಸುರಿಸಿ ಬೀಳ್ಕೊಡುಗೆ: ಸಿಬ್ಬಂದಿಯ ಪ್ರೀತಿಗೆ ಭಾವುಕರಾದ ಚಿಕ್ಕಮಗಳೂರು ಎಸ್ಪಿ - Etv bharat news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16082638-thumbnail-3x2-sp.jpg)
ಚಿಕ್ಕಮಗಳೂರು: ವರ್ಗಾವಣೆಯಾದ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಮಚ್ಚಿಂದ್ರಾ ಅವರಿಗೆ ಹೂಮಳೆ ಸುರಿಸುವ ಮೂಲಕ ಸಿಬ್ಬಂದಿ ಬೀಳ್ಕೊಟ್ಟರು. ಈ ವೇಳೆ, ಸಿಬ್ಬಂದಿ ತೋರಿದ ಪ್ರೀತಿಗೆ ಎಸ್ಪಿ ಭಾವುಕರಾದರು. ನಗರದ ಪೊಲೀಸ್ ಡಿ ಆರ್ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮಕ್ಕೆ ತೆರೆದ ವಾಹನದಲ್ಲಿ ಎಸ್ಪಿ ಅವರನ್ನು ಕರೆತಂದು, ಹೂ ಮಳೆಗರೆಯಲಾಯಿತು. ಸಹ ಸಿಬ್ಬಂದಿಯ ಪ್ರೀತಿ, ಅಭಿಮಾನಕ್ಕೆ ಎಸ್ಪಿ ಮನಸೋತ ಭಾವುಕರಾದರು. ಎಸ್ಪಿ ಅಕ್ಷಯ್ ಅವರ ದಕ್ಷತೆ ಜಿಲ್ಲೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.