ವಿಡಿಯೋ: ಮೂರ್ಚೆ ರೋಗಿಯ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದ ಮಹಿಳಾ ಪಿಎಸ್ಐ - Bangalore police Humanity
🎬 Watch Now: Feature Video
ಬೆಂಗಳೂರು: ಪೊಲೀಸರೆಂದ್ರೆ ಈಗಲೂ ಕೆಲ ಜನರಿಗೆ ಭಯವಿದೆ. ಮಾನವೀಯತೆಯ ಮಮಕಾರವಿಲ್ಲದವರು, ಅಹಂಕಾರಿಗಳು ಎಂದು ಮಾತನಾಡಿಕೊಳ್ಳುವುದುಂಟು. ಆದ್ರೆ, ಅವರೂ ಸಹ ಮಾನವೀಯ ಮೌಲ್ಯ ಹೊಂದಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಂತಿದೆ ನಗರದಲ್ಲಿ ನಡೆದ ಘಟನೆ. ಚಂದ್ರಾಲೇಔಟ್ ವ್ಯಾಪ್ತಿಯಲ್ಲಿ ಇಮ್ರಾನ್ (25 )ಎಂಬಾತ ಏಕಾಏಕಿ ಮೂರ್ಚೆ ಬಂದು ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಈ ವೇಳೆ ಗಸ್ತಿನಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಅನಿತಾಲಕ್ಷ್ಮೀ ಕೂಡಲೇ ಸ್ಥಳಕ್ಕೆ ತೆರಳಿ, ಪಕ್ಕದ ಗ್ಯಾರೇಜ್ನಲ್ಲಿದ್ದ ಕಬ್ಬಿಣವನ್ನ ತಂದು ಆತನ ಕೈಗಿಟ್ಟಿದ್ದಾರೆ. ಬಳಿಕ ಆತನನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಕುಡಿತದ ಚಟ ಹೊಂದಿದ್ದ ಇಮ್ರಾನ್ಗೆ ಬುದ್ಧಿ ಮಾತು ಹೇಳಿದ್ದಾರೆ. ಪಿಎಸ್ಐ ಅವರ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.