ಚಾಮರಾಜಪೇಟೆ ಗಣೇಶೋತ್ಸವ: ಡಿಜೆ ಅಬ್ಬರದಲ್ಲಿ ಮೂರ್ತಿಯ ಮೆರವಣಿಗೆ - ಈಟಿವಿ ಭಾರತ್ ಕರ್ನಾಟಕ
🎬 Watch Now: Feature Video
ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನ ಪಕ್ಕದಲ್ಲಿ 7 ದಿನಗಳ ಕಾಲ ಕೂರಿಸಿದ್ದ ಬೃಹತ್ ಗಾತ್ರದ ಗಣೇಶನನ್ನು ಅದ್ಧೂರಿ ಮೆರವಣಿಗೆಯ ಮೂಲಕ ಯಡಿಯೂರು ಕೆರೆಯಲ್ಲಿ ನಿಮಜ್ಜನ ಮಾಡಲಾಯಿತು. ಮೈದಾನದಿಂದ ಹೊರಟ ಮೆರವಣಿಗೆ ಚಾಮರಾಜಪೇಟೆಯ ಮುಖ್ಯರಸ್ತೆಯ ಮೂಲಕ ಟೌನ್ ಹಾಲ್ ತಲುಪಿತು. "ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ 34 ಗಣಪತಿಗಳ ಮೆರವಣಿಗೆ ನಡೆದಿದೆ. ನಮ್ಮ ಕೆಎಸ್ಆರ್ಪಿ ಹಾಗೂ ಸಿಎಆರ್ ಸಿಬ್ಬಂದಿ ತುಂಬಾ ಚೆನ್ನಾಗಿ ಭದ್ರತೆ ಕಾರ್ಯ ನಿರ್ವಹಿಸಿದರು" ಎಂದು ಪಶ್ಚಿಮ ವಿಭಾಗ ಡಿಸಿಪಿ ಲಕ್ಷ್ಮಣ ನಿಂಬರಗಿ ಹೇಳಿದರು.