ನಿಯಂತ್ರಣ ತಪ್ಪಿದ ಕಾರು : ಮೂರು ಬೈಕ್ಗಳಿಗೆ ಡಿಕ್ಕಿ, ಓರ್ವ ಸಾವು - car loses control and rams onto three two wheelers at Panamaram in Wyanad on Monday
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15488905-thumbnail-3x2-nin.jpg)
ವಯನಾಡು (ಕೇರಳ) : ಕಾರೊಂದು ನಿಯಂತ್ರಣ ತಪ್ಪಿ ಮೂರು ದ್ವಿಚಕ್ರ ವಾಹನಗಳಿಗೆ ಗುದ್ದಿದ ಘಟನೆ ವಯನಾಡಿನ ಪನಮರಮ್ ನಲ್ಲಿ ನಡೆದಿದೆ. ಅಪಘಾತದಲ್ಲಿ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಕೊನೆಗೆ ಕಾರು ಗೋಡೆಗೆ ಡಿಕ್ಕಿ ಹೊಡೆದು ನಿಂತಿದೆ. ಕೊಂಡೊಟ್ಟಿಯಿಂದ ಮಾನಂದವಾಡಿ ಕಡೆಗೆ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಡಿಕ್ಕಿ ಹೊಡೆದ ಮೊದಲ ವ್ಯಕ್ತಿ ಸುನೀಲ್ ಅವರನ್ನು ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.