ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಕಾರಿಗೆ ಬೆಂಕಿ ಇಟ್ಟ ಕಿಡಿಗೇಡಿ.. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ - Car burned in shivamogga

🎬 Watch Now: Feature Video

thumbnail

By

Published : Jun 28, 2022, 3:50 PM IST

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಯೊಬ್ಬ ಸೋಮವಾರ ತಡರಾತ್ರಿ ಬೆಂಕಿ ಹಚ್ಚಿರುವ ಘಟನೆ ನಗರದಲ್ಲಿ ನಡೆದಿದೆ. ಕಾರಿನ ಬಹುಭಾಗ ಸುಟ್ಟು ಕರಕಲಾಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜೆ.ಎಸ್.ಕೆ.ಎಂ ರಸ್ತೆಯಲ್ಲಿ ವಾಸವಾಗಿರುವ ಶಿಕ್ಷಕ ವೆಂಕಟೇಶ್ ಎಂಬುವರಿಗೆ ಸೇರಿದ ಇಕೋ ಸ್ಪೋರ್ಟ್ಸ್ ಕಾರಿಗೆ ಬೆಂಕಿ ಹಚ್ಚಲಾಗಿದೆ. ಮಧ್ಯರಾತ್ರಿ 2.45 ರಿಂದ 3.15 ನಡುವೆ ಈ ಕೃತ್ಯ ನಡೆಸಿರುವ ಸಾದ್ಯತೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ‘ಕ್ಯಾಪ್ ಧರಿಸಿಕೊಂಡು ಬಂದ ವ್ಯಕ್ತಿಯೊಬ್ಬ ಬಾನೆಟ್ ಮೇಲೆ ಯಾವುದೋ ವಸ್ತು ಇಟ್ಟು ಬೆಂಕಿ ಹಚ್ಚಿದಾನೆ. ಅಕ್ಕಪಕ್ಕದ ಹಲವು ವಾಹನಗಳಿದ್ದರೂ ಇದೊಂದು ವಾಹನಕ್ಕೆ ಮಾತ್ರ ಬೆಂಕಿ ಹಚ್ಚಿದ್ದಾನೆ. ಈ ಕುರಿತು ತನಿಖೆ ನಡೆಯುತ್ತಿದೆ’ ಎಂದು ಎಸ್​ಪಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.