ಅಪ್ರಾಪ್ತರಿಂದ ಕಾರು ಅಪಘಾತ : ಮೂವರಿಗೆ ಗಂಭೀರ ಗಾಯ - ಗುಂಟೂರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15752273-thumbnail-3x2-bng.jpg)
ಗುಂಟೂರು (ಆಂಧ್ರಪ್ರದೇಶ) : ಜಿಲ್ಲೆಯ ತೆನಾಲಿಯಲ್ಲಿ ಕಾರೊಂದು ಅವಾಂತರ ಸೃಷ್ಟಿಸಿದೆ. ದುಗ್ಗಿರಾಲ ಕಡೆಯಿಂದ ತೆನಾಲಿಗೆ ಬರುತ್ತಿದ್ದ ಇಬ್ಬರು ಅಪ್ರಾಪ್ತ ಗಣಿ ಕಾರ್ಮಿಕರು ಅತಿವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದು, ಪಟ್ಟಣದ ಟೆಲಿಫೋನ್ ಎಕ್ಸ್‌ಚೇಂಜ್ ರಸ್ತೆಯಲ್ಲಿ ಕಾರು ನಿಯಂತ್ರಣ ತಪ್ಪಿ ರಿಕ್ಷಾ ದುರಸ್ತಿ ಮಾಡುತ್ತಿದ್ದ ಮೂವರಿಗೆ ಗುದ್ದಿದೆ. ಈ ಅಪಘಾತದಲ್ಲಿ ಓರ್ವನ ಕಾಲು ನಜ್ಜುಗುಜ್ಜಾಗಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ತೆನಾಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.