ಕಂದಕಕ್ಕೆ ಉರುಳಿ ಬಿದ್ದ ಬಸ್​​: ಓರ್ವ ಪ್ರಯಾಣಿಕ ಸಾವು, 58 ಮಂದಿಗೆ ಗಾಯ - bus falls down hillside in Kerala

🎬 Watch Now: Feature Video

thumbnail

By

Published : Sep 12, 2022, 1:30 PM IST

Updated : Sep 12, 2022, 1:55 PM IST

ಇಡುಕ್ಕಿ(ಕೇರಳ): ಎರ್ನಾಕುಲಂಗೆ ತೆರಳುತ್ತಿದ್ದ ಬಸ್​​​​​​​​ವೊಂದು ನೆರಿಯಮಂಗಲಂ ಎಂಬಲ್ಲಿ ಕಂದಕಕ್ಕೆ ಉರುಳಿಬಿದ್ದಿದೆ. ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. 58 ಪ್ರಯಾಣಿಕರು ಗಾಯಗೊಂಡಿದ್ದಾರೆ. ಇಂದು ಬೆಳಗ್ಗೆ ಘಟನೆ ನಡೆದಿದೆ. ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್​ ದಿಢೀರ್​ ಆಗಿ ಸುಮಾರು 14-15 ಅಡಿಗಳಷ್ಟು ಆಳದ ಕಂದಕಕ್ಕೆ ಬಿದ್ದಿದೆ. ಬಸ್​​ನ ಟೈರ್​​ ಒಡೆದು ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಾತನಾಡಿರುವ ಬಸ್ ನಿರ್ವಾಹಕ​ ಸುಭಾಷ್​, "ಬಸ್​ನಲ್ಲಿ 60 ಪ್ರಯಾಣಿಕರಿದ್ದರು. ಎದುರುಗಡೆಯಿಂದ ಬಂದ ವಾಹನ ಬಸ್​​ಗೆ ಡಿಕ್ಕಿ ಹೊಡೆದು ಘಟನೆ ನಡೆದಿದೆ" ಎಂದರು. ಗಾಯಾಳುಗಳನ್ನು ಎರ್ನಾಕುಲಂ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
Last Updated : Sep 12, 2022, 1:55 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.