ಶಬ್ದಕ್ಕೆ ಹೆದರಿ ಬೈಕ್ ಸವಾರನಿಗೆ ಗುದ್ದಿದ ಎಮ್ಮೆ.. ಶಬ್ದ ಮಾಲಿನ್ಯದ ಜಾಗೃತಿ ಮೂಡಿಸಿದ IPS ಸಜ್ಜನರ್ - ಈಟಿವಿ ಭಾರತ್ ಕನ್ನಡ
🎬 Watch Now: Feature Video

ತೆಲಂಗಾಣ : ಶಬ್ದಕ್ಕೆ ಹೆದರಿ ಎಮ್ಮೆಯೊಂದು ಬೈಕ್ಗೆ ಗುದ್ದಿದ್ದು ಸವಾರ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ವಿಡಿಯೋವನ್ನು ಐಪಿಎಸ್ ಅಧಿಕಾರಿಯೊಬ್ಬರು ಶೇರ್ ಮಾಡಿ ಶಬ್ದ ಮಾಲಿನ್ಯದ ಜಾಗೃತಿ ಮೂಡಿಸಿದ್ದಾರೆ. ಬೈಕ್ನ ಶಬ್ದಕ್ಕೆ ಹೆದರಿ ಎಮ್ಮೆ ಒಮ್ಮೆಗೆ ತಿರುಗಿದಾಗ ಸವಾರನಿಗೆ ತಾಗಿ ಕೆಳಗೆ ಬೀಳುತ್ತಾರೆ. ಈ ವಿಡಿಯೋವನ್ನು ಹಂಚಿ ಶಬ್ದ ಮಾಲಿನ್ಯದಿಂದ ಆಗುವ ಹಾನಿಗೆ ಇದೊಂದು ನಿದರ್ಶನ. ಹಾರ್ನ್, ಸೈಲೆನ್ಸರ್ ಮತ್ತು ಬದಲಾವಣೆಯೊಂದಿಗೆ ಚಾಲನೆ ಮಾಡುವುದರಿಂದ ಒತ್ತಡ, ಅಧಿಕ ಬಿಪಿ, ಕಿವುಡುತನ ಮತ್ತು ಹೃದಯ ರಕ್ತನಾಳದ ಕಾಯಿಲೆಗಳು ಉಂಟಾಗುತ್ತದೆ ಎಂದು ಐಪಿಎಸ್ ಅಧಿಕಾರಿ ವಿ ಸಿ ಸಜ್ಜನರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.