ಕಾವೇರಿ ಹೊರಹರಿವು ಹೆಚ್ಚಳ: ಭೋರ್ಗರೆಯುತ್ತಿದೆ ಭರಚುಕ್ಕಿ, ಹೊಗೆನಕಲ್ ಫಾಲ್ಸ್ - ಧುಮ್ಮಿಕ್ಕುತ್ತಿರುವ ಹೊಗೆನಕಲ್ ಜಲಪಾತ
🎬 Watch Now: Feature Video
ಚಾಮರಾಜನಗರ: ಕಾವೇರಿ ನದಿಯ ಹೊರಹರಿವು ಹೆಚ್ಚುತ್ತಿದ್ದಂತೆ ರಾಜ್ಯದ ಗಡಿಯಲ್ಲಿರುವ ಹೊಗೆನಕಲ್ ಜಲಪಾತ ಮತ್ತು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಫಾಲ್ಸ್ ಭೋರ್ಗರೆತ ಜೋರಾಗಿದೆ. ಕಬಿನಿ ಮತ್ತು ಕೆಆರ್ಎಸ್ ಆಣೆಕಟ್ಟೆಯಿಂದ ಹೊರಹರಿವು ಹೆಚ್ಚಾಗಿದೆ. ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿರುವ ಹೊಗೆನಕಲ್ ಜಲಪಾತ ಹಾಗೂ ಭರಚುಕ್ಕಿ ವೈಭವ ರುದ್ರರಮಣೀಯವಾಗಿದ್ದು, ಜಲಧಾರೆ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮಳೆಯ ನಡುವೆಯೂ ಬರುತ್ತಿದ್ದಾರೆ. ಸದ್ಯ ಪ್ರವಾಸಿಗರ ಪ್ರವೇಶಕ್ಕೆ ಅವಕಾಶವಿದ್ದು, ಕಳೆದ ಬಾರಿಯಂತೆ ಅತಿಯಾದ ಪ್ರಮಾಣದಲ್ಲಿ ನೀರು ಬಂದರೆ ನಿರ್ಬಂಧ ಹೇರಲಾಗುತ್ತಿದೆ.