ಬಂಟ್ವಾಳ: ನೀರು ಕುಡಿಯಲು ಬಂದು ನೀರಿನ ಟ್ಯಾಂಕ್ಗೆ ಬಿದ್ದ ಕಾಡುಕೋಣ - wildbuffalow fell into a water tank at Bantwal
🎬 Watch Now: Feature Video
ಬಂಟ್ವಾಳ: ಕಾಡಿನಿಂದ ನಾಡಿಗೆ ನೀರನ್ನು ಹುಡುಕಿಕೊಂಡು ಬಂದ ಕಾಡುಕೋಣವೊಂದು ನೀರಿನ ಟ್ಯಾಂಕ್ಗೆ ಬಿದ್ದು, ಬಳಿಕ ಹೊರಬರಲು ಪರದಾಡಿದ ಘಟನೆ ಕನ್ಯಾನದಲ್ಲಿ ನಡೆದಿದೆ. ಸಮೀಪದಲ್ಲಿರುವ ಕಳೆಂಜೆಮಲೆ ರಕ್ಷಿತಾರಣ್ಯದಿಂದ ಕಾಡುಕೋಣ ನೀರು ಹುಡುಕಿಕೊಂಡು ನಾಡಿಗೆ ಬಂದಿದೆ. ಕನ್ಯಾನ ಭಾರತ ಸೇವಾಶ್ರಮದ ನೀರಿನ ಟ್ಯಾಂಕ್ನಲ್ಲಿ ನೀರು ಕುಡಿಯಲು ಯತ್ನಿಸಿದೆ. ಈ ಸಂದರ್ಭ, ಕೋಣ ಟ್ಯಾಂಕ್ಗೆ ಜಾರಿ ಬಿದ್ದಿದೆ. ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಬೆಳಗ್ಗೆ ಆಶ್ರಮ ನಿವಾಸಿಗಳು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವಿಟ್ಲ ಶಾಖೆಯ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ನಡೆಸಿದರು. ಟ್ಯಾಂಕ್ನಿಂದ ನೀರು ಖಾಲಿ ಮಾಡಿ, ಕೋಣವನ್ನು ಮೇಲಕ್ಕೆತ್ತಿದರು.