ಅಸ್ಸೋಂನಲ್ಲಿ ಭೀಕರ ಮಳೆ: ದೋಣಿಯಲ್ಲಿ ತೆರಳಿ ಪ್ರವಾಹ ಪರಿಶೀಲಿಸಿದ ಸಿಎಂ ಹಿಮಂತ್ ಬಿಸ್ವಾ ಶರ್ಮಾ - ಎನ್ಡಿಆರ್ಎಫ್ ಜೊತೆ ಪ್ರವಾಹ ಪರಿಸ್ಥಿತಿ ಪರಿಶೀಲನೆ
🎬 Watch Now: Feature Video
ಅಸ್ಸೋಂನಲ್ಲಿ ಭೀಕರ ಮಳೆಗೆ ಭಾರಿ ಪ್ರವಾಹ ಉಂಟಾಗಿದೆ. ಹಲವಾರು ಹಳ್ಳಿಗಳು ನಡುಗಡ್ಡೆಯಾಗಿ ಮಾರ್ಪಾಡಾಗಿವೆ. ಲಕ್ಷಾಂತರ ಜನರನ್ನು ಎನ್ಡಿಆರ್ಎಫ್ ತಂಡಗಳು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುತ್ತಿದೆ. ಇಂದು ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರು ಎನ್ಡಿಆರ್ಎಫ್ ತಂಡದೊಂದಿಗೆ ನಾಗಾವ್ ಜಿಲ್ಲೆಯಲ್ಲಿ ಉಂಟಾದ ಮಳೆ ಹಾನಿ ಪರಿಸ್ಥಿತಿಯನ್ನು ಬೋಟ್ನಲ್ಲಿ ತೆರಳಿ ಪರಿಶೀಲಿಸಿದರು.