ಏಷ್ಯಾ ಕಪ್ನಲ್ಲಿ ಪಾಕ್ ವಿರುದ್ಧ ಸೆಣಸಾಟ: ಕೆ ಎಲ್ ರಾಹುಲ್ ಹೇಳಿದ್ದಿಷ್ಟು.. - ಕೆಎಲ್ ರಾಹುಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16207457-thumbnail-3x2-wdfdfd.jpg)
ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಆಗಸ್ಟ್ 28ರಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಉಭಯ ತಂಡಗಳ ಆಟಗಾರರು ಈಗಾಗಲೇ ನೆಟ್ಸ್ನಲ್ಲಿ ಬೆವರು ಹರಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಟೀಂ ಇಂಡಿಯಾ ಉಪನಾಯಕ ಕೆ ಎಲ್ ರಾಹುಲ್, ಐಸಿಸಿ ಹೊರತುಪಡಿಸಿ ಬೇರಾವುದೇ ಟೂರ್ನಿಗಳಲ್ಲಿ ನಾವು ಆಡಲ್ಲ. ಹೀಗಾಗಿ, ಯಾವಾಗಲೂ ಉಭಯ ತಂಡಗಳು ಮೈದಾನದಲ್ಲಿ ಮುಖಾಮುಖಿಯಾಗುವುದನ್ನು ಎದುರು ನೋಡಲಾಗುತ್ತದೆ. ಪಾಕ್ ವಿರುದ್ಧ ಸ್ಪರ್ಧಿಸಲು ನಾವು ಉತ್ಸುಕರಾಗಿದ್ದೇವೆ ಎಂದರು. ಮಾತು ಮುಂದುವರೆಸಿ, 2021ರ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಸೋಲಿನ ಬಗ್ಗೆ ಪ್ರತಿಕ್ರಿಯಿಸಿ, ನಾವು ಎಷ್ಟು ಬಾರಿ ಆಡಿದ್ದೇವೆ ಮತ್ತು ಎಷ್ಟು ಸಲ ಗೆದ್ದಿದ್ದೇವೆ ಎಂಬುದರ ಇತಿಹಾಸವಿರಬಹುದು. ಆದರೆ, ಯಾವುದಕ್ಕೂ ಲೆಕ್ಕವಿಲ್ಲ. ಯಾವಾಗಲೂ ಸೊನ್ನೆಯಿಂದಲೇ ಅಭಿಯಾನ ಪ್ರಾರಂಭವಾಗುತ್ತದೆ. ಏಷ್ಯಾ ಕಪ್ನಲ್ಲಿ ಉತ್ತಮ ಆರಂಭ ಪಡೆದುಕೊಳ್ಳುವ ತವಕದಲ್ಲಿದ್ದೇವೆ ಎಂದರು.