ಒಂದೆಡೆ ಗಣಿಗಾರಿಕೆ: ಮತ್ತೊಂದೆಡೆ ಕುಸಿದು ಬಿದ್ದ ಬೃಹತ್ ಗುಡ್ಡ.. ವಿಡಿಯೋ - ಆಂಧ್ರದಲ್ಲಿ ಕುಸಿದು ಬಿದ್ದ ಬೃಹತ್ ಗುಡ್ಡ
🎬 Watch Now: Feature Video
ವಿಶಾಖಪಟ್ಟಣಂ (ಆಂಧ್ರಪ್ರದೇಶ): ದೊಡ್ಡ ಗುಡ್ಡವೊಂದು ಕುಸಿದಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪೆಂಡುರ್ತಿ ವಲಯದ ದುವ್ವಪಾಲೆಂ ಸಮೀಪದ ಕ್ವಾರಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಗುಡ್ಡ ಕುಸಿಯುವ ಸಂದರ್ಭದಲ್ಲಿ ಅಲ್ಲಿ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತೆ ಆಗಿದೆ. ಕಲ್ಲು ಗಣಿಗಾರಿಕೆ ವೇಳೆ ಒಂದೆಡೆ ಗುಡ್ಡ ಅಗೆದು ಬಿಟ್ಟಿದ್ದರೆ, ಇನ್ನರ್ಧ ತಾನೇ ದಿಢೀರ್ ಕುಸಿದು ಬಿದ್ದಿದೆ. ಇದರ ದೃಶ್ಯಗಳನ್ನು ಸ್ಥಳೀಯ ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು, ಒಂದು ವಾರದ ಹಿಂದೆ ಗಣಿಗಾರಿಕೆ ಮಾಡಲಾಗಿತ್ತು ಎನ್ನಲಾಗಿತ್ತು. ಗುಡ್ಡ ಕುಸಿದ ವಿಷಯ ತಿಳಿದ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕವಾಗಿ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.