'ಆಂಧ್ರ ನನ್ನ ತಾಯಿ ಮನೆ; ತಮಿಳುನಾಡು ನನ್ನ ಅತ್ತೆ ಮನೆ': ಸಚಿವೆ ರೋಜಾ - ನಟಿ ರೋಜಾ ತಮಿಳುನಾಡಿನ ಪ್ರಮುಖ ದೇವಾಲಯ
🎬 Watch Now: Feature Video
ಕಾಂಚೀಪುರಂ(ತಮಿಳುನಾಡು): ಆಂಧ್ರಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಟಿ ರೋಜಾ ತಮಿಳುನಾಡಿನ ಪ್ರಮುಖ ದೇವಾಲಯಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂಚೀಪುರಂನ ಶ್ರೀ ಕಾಮಚ್ಚಿ ಅಮ್ಮನ್ ದೇವಸ್ಥಾನದಲ್ಲಿ ದರ್ಶನ ಪಡೆದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಪ್ರತಿ ಚಿತ್ರದಲ್ಲಿ ನಟನೆ ಮಾಡಿದ ಬಳಿಕ ಈ ದೇವಸ್ಥಾನಕ್ಕೆ ಬರುತ್ತೇನೆ. ಕಾಮಚ್ಚಿ ಅಮ್ಮ ನನ್ನ ಕೋರಿಕೆ ಈಡೇರಿಸಿದ್ದಾಳೆ. ಅದಕ್ಕಾಗಿ ತಮಿಳುನಾಡಿನ ಎಲ್ಲ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದೇನೆ ಎಂದರು. ಇದೇ ವೇಳೆ ಆಂಧ್ರಪ್ರದೇಶ ನನ್ನ ತಾಯಿಯ ಮನೆ, ತಮಿಳುನಾಡು ನನ್ನ ಅತ್ತೆಯ ಮನೆ ಎಂದಿದ್ದಾರೆ.