ಹದಗೆಟ್ಟ ರಸ್ತೆಯ ಗುಂಡಿಯಲ್ಲಿ ಸಿಲುಕಿದ ಆ್ಯಂಬುಲೆನ್ಸ್: ಮಾರ್ಗಮಧ್ಯೆಯೇ ಮಗುವಿಗೆ ಜನ್ಮ ನೀಡಿದ ಮಹಿಳೆ - Etv Bharat Kannada
🎬 Watch Now: Feature Video
ಬಸ್ತಿ (ಉತ್ತರ ಪ್ರದೇಶ): ಹದಗೆಟ್ಟ ರಸ್ತೆಯಲ್ಲಿ ಆ್ಯಂಬುಲೆನ್ಸ್ ಮುಂದೆ ಚಲಿಸಲು ಸಾಧ್ಯವಾಗದೇ ಗರ್ಭಿಣಿಯೊಬ್ಬರು ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆಯನ್ನು ದುಬುಲಿಯಾ ಪ್ರದೇಶದಿಂದ ಆಂಬ್ಯುಲೆನ್ಸ್ನಲ್ಲಿ ರಾಮನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಆಸ್ಪತ್ರೆಗೆ ತೆರಳುವ ರಸ್ತೆ ಹದಗೆಟ್ಟಿದ್ದರಿಂದ ಆ್ಯಂಬುಲೆನ್ಸ್ ಗುಂಡಿಯಲ್ಲೇ ಸಿಲುಕಿಕೊಂಡಿದೆ. ಆ್ಯಂಬುಲೆನ್ಸ್ನ್ನು ಹೊರತೆಗೆಯಲು ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಇದರಿಂದ ಆ ಮಹಿಳೆ ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಅಲ್ಲದೇ, ಇದಾದ ಬಳಿಕ ಕಾಲ್ನಡಿಗೆಯಲ್ಲಿಯೇ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.
Last Updated : Aug 4, 2022, 3:32 PM IST