ಗಣೇಶ ಮೂರ್ತಿ ನಿಮಜ್ಜನ ವಿಡಿಯೋ ಹಂಚಿಕೊಂಡ ನಟ ಅಲ್ಲು ಅರ್ಜುನ್ - ನಟ ಅಲ್ಲು ಅರ್ಜುನ್
🎬 Watch Now: Feature Video
ಸೋಮವಾರ ಹೈದರಾಬಾದ್‌ನಲ್ಲಿ ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ ಮತ್ತು ಅವರ ಮಗಳು ವಿಘ್ನೇಶನಿಗೆ ವಿದಾಯ ಹೇಳಿದ್ದಾರೆ. ನಟ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಗಣಪತಿ ನಿಮಜ್ಜನದ ವಿಡಿಯೋ ಸಹ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅಲ್ಲು ಅರ್ಜುನ್ ತನ್ನ 5 ವರ್ಷದ ಮಗಳು ಅಲ್ಲು ಅರ್ಹಾ ಜೊತೆ ಕಾಣಿಸಿಕೊಂಡಿದ್ದಾರೆ. ಹಸಿರು ಮತ್ತು ಪರಿಸರ ಸುಸ್ಥಿರತೆಯನ್ನು ಸಕ್ರಿಯವಾಗಿ ಉತ್ತೇಜಿಸುವ ಅಲ್ಲು ಅರ್ಜುನ್ ಅವರು ಪರಿಸರ ಸ್ನೇಹಿ ಗಣೇಶ ಮೂರ್ತಿಯೊಂದಿಗೆ ನಿಮಜ್ಜನಕ್ಕೆ ತೆರಳಿದ್ದಾರೆ. ಈ ವಿಡಿಯೋ ಹಂಚಿಕೊಂಡ ಅಲ್ಲು ಅರ್ಜುನ್ ತಮ್ಮ ಇನ್ಸ್ಟಾಗ್ರಾಂನಲ್ಲಿ "ಗಣಪತಿ ಬಪ್ಪಾ ಮೋರಿಯಾ" ಎಂದು ಬರೆದುಕೊಂಡಿದ್ದಾರೆ.