'ವಿಕ್ರಾಂತ್ ರೋಣ' ಪ್ಯಾನ್ ಇಂಡಿಯಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ'... ಉಪ್ಪಿ ಮಾತಿನಲ್ಲೇ ಕೇಳಿ! - ವಿಕ್ರಾಂತ್ ರೋಣ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ
🎬 Watch Now: Feature Video
ವಿಕ್ರಾಂತ್ ರೋಣ ಪ್ರೀ ರಿಲೀಸ್ ಇವೆಂಟ್ನಲ್ಲಿ ಸೂಪರ್ ಸ್ಟಾರ್ ಉಪೇಂದ್ರ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ನನ್ನ ಸುದೀಪ್ ನಡುವಿನ ಸಂಬಂಧ ಸುಮಾರು 25-30 ವರ್ಷ ಹಳೆಯದು. ಈ ಹಿಂದೆ ನಾನು ಡೈರೆಕ್ಟರ್ ಆಗಿದ್ದ ಸಮಯದಲ್ಲಿ ನನ್ನ ಹತ್ತಿರ ಬಂದು ಡೈರೆಕ್ಟರ್ ಆಗ್ತೀನಿ ಅಂದಿದ್ರು. ಆ ಸಮಯದಲ್ಲಿ ನೀವ್ಯಾಕ್ರಿ ಡೈರೆಕ್ಟರ್ ಆಗ್ತೀರಾ?, ಆರು ಕಾಲು ಅಡಿ ಕಟೌಟ್ ನೀವೂ, ಹೀರೋ ಆಗ್ರಿ ಎಂದು ಹೇಳಿದ್ದೆ. ಇದೀಗ ಅವರು ದೊಡ್ಡ ಮಟ್ಟದ ಸೂಪರ್ ಸ್ಟಾರ್ ಆಗಿದ್ದಾರೆ. 'ವಿಕ್ರಾಂತ್ ರೋಣ' ಮೂರು ವರ್ಷಗಳ ಪರಿಶ್ರಮ. ಸಿನಿಮಾ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದ್ದು, ನಾನೂ ಸಿನಿಮಾ ಥಿಯೇಟರ್ನಲ್ಲಿ ಕುಳಿತುಕೊಂಡು ಚಿತ್ರ ವೀಕ್ಷಣೆ ಮಾಡಲಿದ್ದೇನೆ ಎಂದರು. ಇದು ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಪ್ಯಾನ್ ವರ್ಲ್ಡ್ ಸಿನಿಮಾ ಆಗಲಿದೆ. ಕನ್ನಡಿಗರು ಯಾರಿಗೂ ಕಮ್ಮಿ ಇಲ್ಲ ಎಂದು ಹೇಳಿ ಯಶ್ ಇಂಡಿಯಾ ತುಂಬ ಫೇಮಸ್ ಆದ್ರೂ. ಜೊತೆಗೆ ಇಂಡಿಯಾದ ಬಾಕ್ಸ್ ಆಫೀಸ್ ಹೊಡೆದರು. ಇದೀಗ ಸುದೀಪ್ ವರ್ಲ್ಡ್ ಬಾಕ್ಸ್ ಆಫೀಸಿ ಹೊಡೆಯಲು ಹೋಗ್ತಾರೆ. ವಿಕ್ರಾಂತ್ ರೋಣ ವಿಕ್ಟರಿ ರೋಣ ಆಗಲಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಪೇಂದ್ರ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು.
Last Updated : Jul 26, 2022, 9:38 PM IST