ನಂಜುಂಡೇಶ್ವರನ ದರ್ಶನ ಪಡೆದ ಹ್ಯಾಟ್ರಿಕ್ ಹೀರೋ - Byragi kannada cinema
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15656745-thumbnail-3x2-yyy.jpg)
ಮೈಸೂರು : ನಂಜನಗೂಡಿನ ಐತಿಹಾಸಿಕ ನಂಜುಂಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶಿವರಾಜ್ ಕುಮಾರ್, ಶ್ರೀಕಂಠೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಬೈರಾಗಿ ಸಿನಿಮಾದ ಪ್ರಚಾರದ ಹಿನ್ನೆಲೆಯಲ್ಲಿ ನಂಜನಗೂಡಿಗೆ ಪತ್ನಿ ಗೀತಾರೊಂದಿಗೆ ಶಿವರಾಜ್ ಕುಮಾರ್ ಆಗಮಿಸಿದ್ದರು. ಶಿವರಾಜ್ ಕುಮಾರ್ ಅವರು ಬಂದ ವಿಷಯ ತಿಳಿದು ಅಭಿಮಾನಿಗಳು ದೇವಸ್ಥಾನದ ಸುತ್ತ ಜಮಾಯಿಸಿದ್ದರು. ಬಳಿಕ ಕ್ರೇನ್ ಮೂಲಕ ಬೃಹತ್ ಹೂವಿನ ಹಾರವನ್ನು ಹಾಕಲಾಯಿತು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.