ಕತ್ತೆಗಳು ಸಾರ್ ಕತ್ತೆಗಳು.. ಲಕ್ಕವ್ವದೇವಿ ಜಾತ್ರೆಯಲ್ಲಿ ಗಮನ ಸೆಳೆದ ಕತ್ತೆಗಳ ಓಟದ ಸ್ಪರ್ಧೆ - A race of donkeys for the Lakkavdevi Devi Fair
🎬 Watch Now: Feature Video

ಬಾಗಲಕೋಟೆ : ಜಿಲ್ಲೆಯ ರಬಕವಿ ಬನ್ನಹಟ್ಟಿಯಲ್ಲಿ ನಡೆಯುವ ಜಾತ್ರೆಯಲ್ಲಿ ಕತ್ತೆಯ ಓಟದ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಇಲ್ಲಿನ ರಾಮಪೂರದಲ್ಲಿ ಲಕ್ಕವ್ವದೇವಿ ಜಾತ್ರೆ ನಿಮಿತ್ತ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 10ಕ್ಕೂ ಅಧಿಕ ಕತ್ತೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಕತ್ತೆ ಓಟ ನಗರಸಭೆ ಕಚೇರಿಗೆವರೆಗೆ ಸಾಗಿ ನಂತರ ಆರಂಭಿಕ ಸ್ಥಾನಕ್ಕೆ ಬರುವಂತೆ ನಿಯಮ ಮಾಡಲಾಗಿತ್ತು. ರೇಸ್‌ನಲ್ಲಿ ರಬಕವಿ-ಬನಹಟ್ಟಿ, ರಾಮಪೂರ ಹಾಗು ಆಸಂಗಿ ಗ್ರಾಮಗಳಿಂದ ಆಗಮಿಸಿದ ಕತ್ತೆಗಳು ಪಾಲ್ಗೊಂಡಿದ್ದವು. ಪ್ರಥಮ ಸ್ಥಾನವನ್ನು ರಾಮಪೂರದ ರವಿ ಭಜಂತ್ರಿಯವರ ಕತ್ತೆ, ದ್ವಿತೀಯ ಸ್ಥಾನವನ್ನು ಬನಹಟ್ಟಿಯ ಮಹಾದೇವ ಭಜಂತ್ರಿ ಹಾಗು ತೃತೀಯ ಸ್ಥಾನವನ್ನು ರಾಮಪೂರದ ನಾಗಪ್ಪ ಭಜಂತ್ರಿಯವರ ಕತ್ತೆ ಪಡೆದಿದೆ. ಇಲ್ಲಿ ವಾಸಿಸುವ ಭಜಂತ್ರಿ ಸಮುದಾಯದವರ ಕತ್ತೆಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ.