ಚಲಿಸುತ್ತಿರುವ ರೈಲಿನಿಂದ ಬಿದ್ದ ವೃದ್ಧೆ, ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ಬಡ ಜೀವ - Vishwamanava Express Train
🎬 Watch Now: Feature Video
ಇಂದು ಮಧ್ಯಾಹ್ನ 2 ಗಂಟೆಗೆ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ದಾವಣಗೆರೆ ನಿಲ್ಧಾಣದಲ್ಲಿ ಚಲಿಸುತ್ತಿದ್ದಾಗ 60 ವರ್ಷದ ವೃದ್ಧೆಯೊಬ್ಬರು ರೈಲು ಚಲಿಸಲು ಪ್ರಾರಂಭಿಸಿದೆ ಎಂಬುದನ್ನು ತಿಳಿಯದೇ ಕೆಳಗಿಳಿಯಲು ಪ್ರಯತ್ನಿಸಿದ್ದರು. ಆಗ ಆಯ ತಪ್ಪಿ ರೈಲಿನ ಕೆಳಗೆ ಬೀಳುತ್ತಿದ್ದ ಅವರನ್ನು ಅಲ್ಲೇ ಇದ್ದ ರೈಲ್ವೆ ಪೊಲೀಸ್ ಕಾನ್ಸ್ಟೆಬಲ್ ಟಿ.ಆರ್.ಚೇತನ್ ಸರಿಯಾದ ಸಮಯಕ್ಕೆ ರಕ್ಷಣೆ ಮಾಡಿದ್ದಾರೆ. ರೈಲ್ವೆ ಪೊಲೀಸರು ಸಮಯಪ್ರಜ್ಞೆಯಿಂದ ವೃದ್ಧೆಯನ್ನು ರಕ್ಷಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚೇತನ್ ಕಾರ್ಯಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ವೃದ್ಧೆ ಬೆಂಗಳೂರಿನಿಂದ ಮೀರಜ್ಗೆ ಪ್ರಯಾಣ ಬೆಳೆಸುತ್ತಿದ್ದರು ಎಂಬುದು ತಿಳಿದು ಬಂದಿದೆ ಉಳಿದಂತೆ ಯಾವ ಮಾಹಿತಿಯೂ ಲಭ್ಯವಿಲ್ಲ.