ಆರು ನಾಯಿ ಮರಿಗಳಿಗೆ ಹಾಲುಣಿಸಿ ಮಾತೃಪ್ರೇಮ ತೋರಿದ ಹಂದಿ
🎬 Watch Now: Feature Video
ದಾವಣಗೆರೆ: ಹಂದಿಗಳು ನಾಯಿ ಮರಿಗಳನ್ನು ಕಂಡರೆ ಅವುಗಳನ್ನು ಎಳೆದಾಡಿ, ಎಳೆ ಮಾಂಸ ಕಿತ್ತು ತಿನ್ನುವುದನ್ನು ನಾವು ನೀವೆಲ್ಲಾ ಕಂಡಿದ್ದೇವೆ. ಆದ್ರೆ ಇಲ್ಲೊಂದು ವರಾಹ ತನ್ನ ಮರಿಗಳಂತೆ ಆರು ನಾಯಿ ಮರಿಗಳಿಗೆ ಹಾಲುಣಿಸಿ ಮಾತೃಪ್ರೇಮ ತೋರಿರುವ ಅಪರೂಪದ ಘಟನೆ ನಗರದ ರಂಗನಾಥ್ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ. ಆರು ನಾಯಿ ಮರಿಗಳು ತಾಯಿ ಇಲ್ಲದೆ ಹಾಲಿಗಾಗಿ ಪರದಾಡುತ್ತಿದ್ದವು. ನಾಯಿ ಮರಿಗಳಿಗೆ ಹಾಲುಣಿಸುತ್ತಿರುವ ಅಪರೂಪದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ.
Last Updated : Sep 18, 2022, 3:36 PM IST