ಪುಟ್ಟ ಮಗುವಿನಂತೆ ಹೆತ್ತ ತಾಯಿ ಹೊತ್ತು ದೇವಿ ದರ್ಶನ ಮಾಡಿಸಿದ ಮಗ - Durgamma temple
🎬 Watch Now: Feature Video
ಆಂಧ್ರಪ್ರದೇಶ: ತಂದೆ ತಾಯಿಯ ಸೇವೆ ಮಾಡಿ ಖ್ಯಾತಿ ಗಳಿಸಿರುವ ಶ್ರವಣ ಕುಮಾರ ನಮ್ಮೆಲ್ಲರಿಗೂ ತಿಳಿದೇ ಇದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ವಯಸ್ಸಾದ ತಂದೆ-ತಾಯಿಯರ ಸೇವೆಯೇ ಹೊರೆಯೆಂದು ಭಾವಿಸುವವರ ನಡುವೆ ಪುತ್ರನೋರ್ವ ಪುಟ್ಟ ಮಗುವಿನಂತೆ ತನ್ನ ತಾಯಿಯನ್ನ ತೋಳುಗಳಲ್ಲಿ ಹೊತ್ತುಕೊಂಡು ಬಂದು ದೇವಿ ನೋಡುವ ಬಯಕೆಯನ್ನ ಪೂರೈಸಿದ ಅಪರೂಪದ ಘಟನೆ ನಡೆದಿದೆ. ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಪರವಾಡ ಮಂಡಲದ ಪೇಡವಾಡದಿಂದ ಪುತ್ರ ಜಗನ್ನಾಥ್ ರಾವ್ ಕಾರಿನಲ್ಲಿ ತಾಯಿ ಸುಶೀಲಾ ಅವರನ್ನ ವಿಜಯವಾಡಕ್ಕೆ ಕರೆದುಕೊಂಡು ಬಂದರು. ಅಲ್ಲಿಂದ ಅಮ್ಮನನ್ನು ಕೈಯಲ್ಲಿ ಎತ್ತಿಕೊಂಡು ದೇವಸ್ಥಾನದ ಕಡೆ ನಡೆದರು. ಭಕ್ತರಿಗೆ ವ್ಯವಸ್ಥೆ ಮಾಡಿದ್ದ ಉಚಿತ ಬಸ್ನಲ್ಲಿ ಬೆಟ್ಟಕ್ಕೆ ತೆರಳಿದರು. ಅಲ್ಲಿಂದ ಮತ್ತೆ ತಾಯಿಯನ್ನು ಎತ್ತಿಕೊಂಡು ದುರ್ಗಮ್ಮ ದೇವಸ್ಥಾನದ ಒಳಗೆ ಹೋಗಿ ದೇವಿಯ ದರ್ಶನ ಪಡೆದರು.